ನಿಮ್ಮ iPhone ಅನ್ನು ಮೊದಲ ಬಾರಿ ಆನ್ ಮಾಡಿದಾಗ ಕಾಣಿಸಿಕೊಳ್ಳುವ ನಮಸ್ಕಾರದ ಸ್ಕ್ರೀನ್.

ಪ್ರಾರಂಭಿಸಿ

ನಿಮ್ಮ ಹೊಸ iPhone ಅನ್ನು ಬಳಸಲು ಪ್ರಾರಂಭಿಸುವ ಮೊದಲು ಕೆಲವು ಬೇಸಿಕ್ ಫೀಚರ್‌ಗಳನ್ನು ಸೆಟಪ್ ಮಾಡಿ.

ಬೇಸಿಕ್‌ಗಳನ್ನು ಸೆಟಪ್ ಮಾಡಿ

iPhone ಹೋಮ್ ಸ್ಕ್ರೀನ್. ಆ್ಯಪ್‌ಗಳು ಸ್ಕ್ರೀನ್‌ನ ಕೆಳಭಾಗದಲ್ಲಿ ಒಂದೇ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ವಾಲ್‌ಪೇಪರ್ ಫೋಟೋದಲ್ಲಿನ ಬಣ್ಣಕ್ಕೆ ಪೂರಕವಾಗಿರುತ್ತವೆ.

ವೈಯಕ್ತೀಕರಿಸಿ

ನಿಮ್ಮ iPhone ನಿಮ್ಮ ವೈಯಕ್ತಿಕ ಶೈಲಿ ಮತ್ತು ಆದ್ಯತೆಗಳನ್ನು ತೋರಿಸಬಲ್ಲದು. ಲಾಕ್ ಸ್ಕ್ರೀನ್‌ನಲ್ಲಿ ನಿಮ್ಮ ನೆಚ್ಚಿನ ಫೋಟೋಗಳನ್ನು ತೋರಿಸಿ, ಹೋಮ್ ಸ್ಕ್ರೀನ್‌ಗೆ ವಿಜೆಟ್‌ಗಳನ್ನು ಸೇರಿಸಿ, ಹಾಗೂ ಪಠ್ಯದ ಗಾತ್ರ, ರಿಂಗ್‌ಟೋನ್‌ಗಳು ಮತ್ತು ಹೆಚ್ಚಿನವುಗಳನ್ನು ಸರಿಹೊಂದಿಸಿ.

ನಿಮ್ಮ iPhone ಅನ್ನು ನಿಮ್ಮದಾಗಿಸಿಕೊಳ್ಳಿ

ಫೋಟೋ ಮೋಡ್‌ನಲ್ಲಿದ್ದು, ಕ್ಯಾಮರಾ ಫ್ರೇಮ್‌ನಲ್ಲಿ ನಾಲ್ಕು ಜನರನ್ನು ತೋರಿಸುತ್ತಿರುವ ಕ್ಯಾಮರಾ ಸ್ಕ್ರೀನ್.

ನಿಮ್ಮ ಅತ್ಯುತ್ತಮ ಶಾಟ್ ಅನ್ನು ತೆಗೆದುಕೊಳ್ಳಿ

ನೀವು ಎಲ್ಲಿದ್ದರೂ ಆ ಕ್ಷಣವನ್ನು ಸೆರೆಹಿಡಿಯಲು ನಿಮ್ಮ iPhone ಅನ್ನು ಬಳಸಿ. ತ್ವರಿತವಾಗಿ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ ಮತ್ತು ನಿಮ್ಮ iPhoneನಲ್ಲಿನ ಇತರ ಕ್ಯಾಮರಾ ಫೀಚರ್‌ಗಳನ್ನು ಬಳಸಿ.

ಅತ್ಯುತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಿ

FaceTime ಕರೆ.

ಕನೆಕ್ಟ್ ಆಗಿಯೇ ಇರಿ

iPhone ನಿಮಗೆ ಮುಖ್ಯವಾಗಿರುವ ಜನರನ್ನು ಸುಲಭವಾಗಿ ಸಂಪರ್ಕಿಸುವಂತೆ ಅನುವುಮಾಡಿಕೊಡುತ್ತದೆ. ಅವರನ್ನು ನಿಮ್ಮ ಸಂಪರ್ಕಗಳಿಗೆ ಸೇರಿಸುವುದರಿಂದ ನಿಮಗೆ ಎಲ್ಲೇ ಅವರ ಮಾಹಿತಿ ಬೇಕೆಂದರೂ ಲಭ್ಯವಿರುತ್ತದೆ—ನಂತರ ಪಠ್ಯ ಸಂದೇಶಗಳು, ಫೋನ್ ಕರೆಗಳು ಅಥವಾ FaceTime ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಿ.

ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಿ

ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಕುಟುಂಬ ಹಂಚಿಕೆ ಸ್ಕ್ರೀನ್. ಕುಟುಂಬದ ಐವರು ಸದಸ್ಯರನ್ನು ಪಟ್ಟಿ ಮಾಡಲಾಗಿದೆ. ಅವರ ಹೆಸರುಗಳ ಕೆಳಗೆ ಕುಟುಂಬ ಚೆಕ್‌ಲಿಸ್ಟ್ ಇದೆ ಹಾಗೂ ಅದರ ಕೆಳಗೆ ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಖರೀದಿ ಹಂಚಿಕೆ ಆಯ್ಕೆಗಳಿವೆ.

ಕುಟುಂಬದ ಎಲ್ಲರೂ

ಅರ್ಹ ಆ್ಯಪ್ ಖರೀದಿಗಳು, ನಿಮ್ಮ ಸ್ಥಳ ಮತ್ತು ಆರೋಗ್ಯದ ಡೇಟವನ್ನು ಹಂಚಿಕೊಳ್ಳಲು ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಕುಟುಂಬ ಹಂಚಿಕೆಯನ್ನು ಬಳಸಬಹುದು. ನಿಮ್ಮ ಪಾಸ್‌ಕೋಡ್ ಅನ್ನು ನೀವು ಮರೆತಿದ್ದರೆ ಆ್ಯಕ್ಸೆಸ್ ಅನ್ನು ಮರಳಿ ಪಡೆಯುವುದಕ್ಕೆ ಸಹಾಯ ಮಾಡಲು ನೀವು ಕುಟುಂಬದ ಸದಸ್ಯರು ಅಥವಾ ನೀವು ವಿಶ್ವಾಸವಿಡುವ ಯಾರನ್ನಾದರೂ ಸಹ ನೀವು ಆಯ್ಕೆಮಾಡಬಹುದು.

ನಿಮ್ಮ ಕುಟುಂಬದೊಂದಿಗೆ ಫೀಚರ್‌ಗಳನ್ನು ಹಂಚಿಕೊಳ್ಳಿ

ಮನೆ ಆ್ಯಪ್‌ಲ್ಲಿರುವ ನನ್ನ ಮನೆ ಎಂಬ ಸ್ಕ್ರೀನ್.

ನಿಮ್ಮ ದಿನವನ್ನು ಸರಳಗೊಳಿಸಿ

ನೀವು ಹೆಚ್ಚಾಗಿ ಹೋಗುವ ಸ್ಥಳಗಳಿಗೆ ನಿಮ್ಮನ್ನು ನಿರ್ದೇಶಿಸಲು, ನಿಮ್ಮ ಬೆಳಗಿನ ಕಾಫಿಗೆ ಪಾವತಿಸಲು, ಮುಖ್ಯವಾದ ಕೆಲಸಗಳನ್ನು ನಿಮಗೆ ನೆನಪಿಸಲು ಮತ್ತು ನೀವು ಮನೆಯಿಂದ ಹೊರಟಾಗ ಮುಂಬಾಗಿಲನ್ನು ಸ್ವಯಂಚಾಲಿತವಾಗಿ ಲಾಕ್ ಮಾಡಲು ಸಹ ನಿಮ್ಮ iPhoneನಲ್ಲಿನ ಆ್ಯಪ್‌ಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಿರಿ.

ನಿಮ್ಮ ದೈನಂದಿನ ದಿನಚರಿಗಳಿಗಾಗಿ iPhone ಬಳಸಿ

ಬ್ಯಾಟರಿ 100% ಚಾರ್ಜ್ ಆಗಿದೆ ಎಂಬುದನ್ನು ತೋರಿಸುವ iPhone ಸ್ಕ್ರೀನ್.

ತಜ್ಞ ಸಲಹೆಗಳು

ನಿಮ್ಮ iPhone ಮತ್ತು ನೀವು ಅದರಲ್ಲಿಡುವ ಮಾಹಿತಿಯನ್ನು ಸುರಕ್ಷಿತವಾಗಿ ಮತ್ತು ಭದ್ರವಾಗಿ ಇರಿಸಲು Apple ಬೆಂಬಲ ಸಲಹೆಗಾರರು ನೀಡಿರುವ ಈ ಸಲಹೆಗಳನ್ನು ಪರಿಶೀಲಿಸಿ.

Apple ಬೆಂಬಲದಿಂದ ತಜ್ಞರ ಸಲಹೆ

iPhone ಬಳಕೆದಾರರ ಮಾರ್ಗದರ್ಶಿಯನ್ನು ಓದಲು, ಪುಟದ ಮೇಲ್ಭಾಗದಲ್ಲಿರುವ ಪರಿವಿಡಿಯನ್ನು ಕ್ಲಿಕ್ ಮಾಡಿ ಅಥವಾ ಹುಡುಕಾಟ ಫೀಲ್ಡ್‌ನಲ್ಲಿ ಒಂದು ಪದ ಅಥವಾ ಫ್ರೇಸ್ ಅನ್ನು ನಮೂದಿಸಿ.

ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.